Header Ads

Half Day Yoga at Cubbon Park : Nov 18, 2018



35 ರ ನಂತರ ಪುರುಷ, 45 ರ ನಂತರ ಮಹಿಳೆ ತನ್ನ ಆರೋಗ್ಯದ ಕಡೆ ವಿಶೇಷ ಗಮನಹರಿಸಿ ಆರೋಗ್ಯವನ್ನ ಕಾಪಿಟ್ಟುಕೊಳ್ಳಬೇಕು ಎಂದು ಖ್ಯಾತ ಹೃದ್ರೋಗತಜ್ಞ ಡಾ. ಸಿ.ಎನ್. ಮಂಜುನಾಥ್ (ಜಯದೇವ ಆಸ್ಪತ್ರೆ ನಿರ್ದೇಶಕರು) ಅವರು ವಿಶ್ವ ಹೃದಯದ ದಿನ ಹೇಳಿದ್ದನ್ನ ಪತ್ರಿಕೆಯಲ್ಲಿ ಓದಿದ್ದೆ. ಬದುಕಿನ ಬಿರುಸಿನ ಓಟದಲ್ಲಿ ಆರೋಗ್ಯ ಕೂಡ ಯಾವ ಸಮಯದಲ್ಲಾದರೂ ಹಳಿ ತಪ್ಪಬಹುದು ಎನಿಸುತ್ತಿತ್ತು. ಇರಲಿ ಎಂದು ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆ ನಂತರ ಯಾವುದೇ ತೊಂದರೆ ಇಲ್ಲಬದುಕಿನ ಒತ್ತಡ ಅತಿಯಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಾಗ ಸಮಾಧಾನವಾದರೂ, ಆರೋಗ್ಯವನ್ನ ಕಾಪಿಟ್ಟುಕೊಳ್ಳಬೇಕು ಎಂದು ದಿನ ಬೆಳಗ್ಗೆ ಸಂಜೆ ಬಿರುಸಿನ ದೈಹಿಕ ಚಟುವಟಿಕೆ ಮಾಡತೊಡಗಿ ಕೊಂಚ ಸಮಾಧಾನವಾಗುವ ಫಲಿತಾಂಶ ಕಂಡರೂ ಇನ್ನೂ ಏನೋ ಬೇಕು ಎಂದು ಮನಸ್ಸು ತುಡಿಯುತ್ತಿದ್ದಾಗಲೇ ಆತ್ಮೀಯ ಗೆಳೆಯ ಚನ್ನಬಸಪ್ಪ ಬೆಂಗಳೂರು ಟ್ರೆಕಿಂಗ್ ಕ್ಲಬ್ ವತಿಯಿಂದ ಉಚಿತ ಯೋಗ ಶಿಬಿರ ಹಮ್ಮಿಕೊಂಡಿದ್ದುಸಾಧ್ಯವಾದರೆ ಭಾಗವಹಿಸು ಹೇಗಿದ್ದರೂ ಇತ್ತೀಚೆಗೆ ಆರೋಗ್ಯದ ಕಾಳಜಿ ಮಾಡುತ್ತಿರುವೆ ಎಂದ. ಸನಾತನ ಯೋಗ ಪದ್ದತಿಯಿಂದ ಮನಸ್ಸು ದೇಹ ಎರಡೂ ಉಲ್ಲಸಿತವಾಗಿರುತ್ತವೆ ಎಂದಾಗ ಏನೋ ಬೇಕು ಎಂಬ ತುಡಿತಕ್ಕೆ ಯೋಗ ಉತ್ತರವಾಗಬಲ್ಲುದೇನೋ ಎನಿಸಿ BTC ಜಾಲತಾಣದಲ್ಲಿ ನೋಂದಾಯಿಸಿದೆ. ಈ BTC ಕೂಡ ಚನ್ನಬಸಪ್ಪನಿಂದ ನನಗೆ ತುಂಬಾ ವರ್ಷಗಳಿಂದಲೇ ಗೊತ್ತಿತಾಗಲಿ ಯಾಕೋ ನಂಟು ಬೆಳೆದಿರಲೇ ಇಲ್ಲ. BTC ವತಿಯಿಂದ ಟ್ರೆಕಿಂಗ್ಸಾಮಾಜಿಕ ಕೆಲಸಗಳು ಇತ್ಯಾದಿ ಇತ್ಯಾದಿ ಮಾಹಿತಿ ಮಾತ್ರ ಕಾಲ ಕಾಲಕ್ಕೆ ಕಾಣಿಸುತಿತ್ತು. ಎಲ್ಲದಕೂ ಸಮಯ ಬರಬೇಕು ಎಂಬಂತೆ ನಾನು BTC ಯೊಂದಿಗೆ ನಂಟು ಬೆಸೆಯಲು ಇದು ಸಕಾಲವಾಗಿತ್ತು. 


ಸರಿ ಹೆಸರು ನೋಂದಾಯಿಸಿದ ಮೇಲೆಸಮಯಸ್ಥಳದ ಮಾಹಿತಿ ಜೊತೆಗೆ ಎಚ್ಚರಿಕೆ (ಕೊನೆ ಕ್ಷಣದಲ್ಲಿ ಕೈ ಕೊಡುವ ಸದಸ್ಯರನ್ನ ತಿಂಗಳ ನಿಷೇಧ) ಇರುವ ಮೇಲ್ ಬಂತು. ಭಾನುವಾರ ಬೆಳಗ್ಗೆ 5.30 ಕ್ಕೆ ಎದ್ದು ನಿತ್ಯಕರ್ಮ ಮುಗಿಸಿ ನಿಗದಿಪಡಿಸಿದ ಸ್ಥಳ ಕಬ್ಬನ್ ಪಾರ್ಕ್ ಹೋದಾಗ ಸುಮಾರು 6.45 ರ ಚುಮುಚುಮು ಚಳಿಯ ಉಲ್ಲಸಿತ ವಾತಾವರಣ. ಹಕ್ಕಿಗಳ ಚಿಲಿಪಿಲಿನಿತ್ಯದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿರುವ ನೂರಾರು ಮಂದಿಮನುಷ್ಯರ ನಿತ್ಯದ ನಾಟಕ ನೋಡುತ್ತಾ ನಗುತ್ತಾ ನಿಂತಿರುವ ಮರಗಳು. ವಾಹನ ನಿಲ್ಲಿಸುವಷ್ಟರಲ್ಲಿ ಸಂಘಟಕ ಚನ್ನಬಸಪ್ಪತರಬೇತುದಾರರಾದ ಶ್ರೀ ಮೊಯಿ ಬಂದಿದ್ದರು. ನಿಗದಿತ ಸಮಯಕ್ಕೆ ಹೆಚ್ಚು ಕಡಿಮೆ ನೊಂದಾಯಿತ ಎಲ್ಲಾ ಸದಸ್ಯರು ಬಂದಾಗ ಒಂದು ಸ್ಥಳ ಗುರುತಿಸಿ ಎಲ್ಲರೂ ತಮ್ಮ ತಮ್ಮ ಭದ್ರಪಡಿಸಿಕೊಂಡಾಗ ಸರಿಯಾಗಿ ಗಂಟೆ. ಜೀವಮಾನದ ಮೊದಲ ಯೋಗ ತರಬೇತಿ. ಪ್ರತಿ ವಿಷಯಕ್ಕೂ ಉದ್ವೇಗಗೊಳ್ಳುತ್ತಿದ್ದ ಮನಸ್ಸುಇಂದು ಅತ್ಯಂತ ಶಾಂತವಾಗಿತ್ತು. ಅದಕ್ಕೂ ಯೋಗದಲ್ಲಿ ಉದ್ವೇಗ ನಿಯಂತ್ರಿಸಿಕೊಳ್ಳಬಹುದು ಎಂಬ ಸತ್ಯದ ಅರಿವಿತ್ತೇನೋ.

 ಸರಿಯಾಗಿ ಗಂಟೆಗೆ ತರಬೇತುದಾರರಾದ ಶ್ರೀ ಮೊಯಿ ಅವರು ಪದ್ಮಾಸನಸೂರ್ಯ ನಮಸ್ಕಾರದೊಂದಿಗೆ ಆರಂಭಿಸಿದರು. ಮೊದಲ ಬಾರಿ ಎಷ್ಟು ಮಂದಿ ಯೋಗ ಮಾಡುತ್ತಿರುವಿರಿ ಎಂದು ಕೇಳಿದಾಗ ಹೆಚ್ಚು ಕಡಿಮೆ 50% ಮಂದಿ ಕೈ ಎತ್ತಿದರು. ಆದರೂ ಮನೋಬಲವಿದ್ದರೆ ಏನಾದರೂ ಮಾಡಬಹುದು ಎಂಬಂತೆ ಎಲ್ಲರೂ ಸುಲಲಿತವಾಗಿ ಪದ್ಮಾಸನ ಹಾಕಿದ್ದು ನೋಡಿ ಶ್ರೀ ಮೊಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದಾಗ ಎಲ್ಲರ ಕಣ್ಣಲ್ಲೂ ಮಿಂಚುಎದೆಯಲ್ಲಿ ಉತ್ಸಾಹಯೋಗವನ್ನ ಕರಗತ ಮಾಡಿಕೊಳ್ಳುವೆವು ಎಂಬ ಛಲ ಉಂಟಾಗಿದ್ದು ಸುಳ್ಳಲ್ಲ. ಹಾಗೆ ಸಾಗಿದ ತರಬೇತಿ ವಿವಿಧ ಆಸನಗಳಾದ ವೃಕ್ಷಾಸನ, ಬದ್ದ ಕೋನಾಸನ, ಶ್ವಾನಾಸನ, ಸೇತು ಬಂಧಾಸನಬಾಲಾಸನಹೀಗೆ ವಿವಿಧ ಆಸನಗಳೊಂದಿಗೆ ಸಾಗಿತ್ತು ತರಬೇತಿ. ಮಧ್ಯದಲ್ಲಿ ಕೆಲವು ಆಸನಗಳನ್ನು ಹಾಕುವಾಗ ಕಷ್ಟವಾಗಿದ್ದು ನಿಜವಾದರೂ ಶ್ರೀ ಮೊಯಿ ಅವರು ವಿಶೇಷ ತ್ರಾಸ ಕೊಡದೆ ಮೊದಲ ಬಾರಿ ಮಾಡುತ್ತಿರುವವರು ಎಂಬ ಕಾಳಜಿಯುಕ್ತ ಸಲಹೆ ಸೂಚನೆ ಕೊಡುತ್ತಾ ಭಂಗಿಗಳನ್ನ ಸರಿಪಡಿಸುತ್ತಿದ್ದರು. ತರಬೇತಿ ಶುರುವಿನಿಂದ ಕೊನೆಯವರೆಗೂ ಪ್ರತೀ ಆಸನದ ಭಂಗಿಯ ಫೋಟೋವನ್ನ ಚನ್ನಬಸಪ್ಪ ಸೆರೆಹಿಡಿಯುತ್ತಾ ಸಾಗಿದರು. ಕೊನೆಯಲ್ಲಿ ನೋಡಿದಾಗ ಎಲ್ಲರ ಫೋಟೋಗಳೂ ಸೇರಿ ಹೆಚ್ಚುಕಡಿಮೆ 100 ಫೋಟೋಗಳಾಗಿದ್ದವು. ತರಬೇತಿಯ ನಂತರ ಚನ್ನ ಹೇಳಿದ್ದು "ಅವರವರ  ಫೋಟೋಗಳನ್ನ ನೋಡಿಕೊಂಡರೆ ಮುಂದಿನ ಬಾರಿ ಮಾಡೋಕೆ ಅವರಿಗೆ ಸ್ವಯಂ ಪ್ರೇರಣೆ ಬರುತ್ತೆ" ಎಂದು. ನನಗೂ ನಿಜವೆನಿಸಿತು. ಮಾನವನಿಗೆ ಎಲ್ಲೊ ದೌರ್ಬಲ್ಯಗಳುಎಲ್ಲೊ ಪ್ರೇರಣೆಗಳು. ಫೋಟೋ ನೋಡಿಕೊಂಡು ಪ್ರೇರಣೆ ಸಿಗುವುದು ಕೆಲವು ಪ್ರತಿಶತ ನಿಜವೇ ಎನಿಸಿತು. ಕೊನೆಯಘಟ್ಟ ಯೋಗನಿದ್ರಾ ಅಥವಾ ಶವಾಸನ ಮಾಡಿಸುವಾಗ ಎಲ್ಲರೂ ಅತೀ ಉತ್ಸಾಹದಿಂದ ಯೋಗನಿದ್ರೆ ಮಾಡಿದರು ಎಂದೇ ಹೇಳಬೇಕು. ಶ್ರಮವಿಲ್ಲದ ಆಸನ. ಆದರೆ ಇಲ್ಲಿ ಒಂದು ವಿಷಯವನ್ನ ಹೇಳಲೇಬೇಕು ಶ್ರೀಮೋಯಿ ಅವರು ಯೋಗನಿದ್ರೆ ಮಾಡಿಸುವಾಗ ದೇಹದ ಪ್ರತಿ ಅಂಗವನ್ನ ಹೆಸರಿಸಿ ಅದಕ್ಕೆ ವಿಶ್ರಾಂತಿ ಕೊಡಲು ಹೇಳುತ್ತಿದ್ದ ಪರಿ ನನ್ನನ್ನಂತೂ ಬೆರಗುಗೊಳಿಸಿತು. ಎದೆಬೆರಳು (ಪ್ರತಿ ಬೆರಳನ್ನು ಪ್ರತ್ಯೇಕವಾಗಿ ಹೆಸರಿಸಿ)ತೋಳುಭುಜಕೆನ್ನೆತುಟಿತೊಡೆನಿತಂಬಕಾಲುಪಾದ ಹೀಗೆ ಪ್ರತಿ ಅಂಗವನ್ನ ಹೆಸರಿಸಿ ಅವನ್ನ ವಿಶ್ರಾಂತಿ ಕೊಟ್ಟು ನಂತರ ಅವನ್ನ ಮತ್ತೆ ಅವನ್ನ ಸಕ್ರಿಯಗೊಳಿಸಿ ಸಮಸ್ಥಿತಿಗೆ ತಂದ ಪರಿಯಂತೂ ಒಂದು ಅದ್ಭುತ ಎಂದೇ ಹೇಳಬಹುದು. ನಾನಂತೂ ಶ್ರೀಮೋಯಿಯವರ ನಿರರ್ಗಳ ತರಬೇತಿಗೆ ಮಾರುಹೋಗಿದ್ದಂತೂ ಸುಳ್ಳಲ್ಲ. ಸರಿಯಾಗಿ ಒಂದು ಗಂಟೆ ಅನೇಕ ಆಸನಗಳೊಂದಿಗೆ ಒಂದೆರಡು ನಿಮಿಷದಂತೆ ಸರಿಯಿತು ಎಂದರೆ ಎಷ್ಟು ಖುಷಿಕೊಟ್ಟಿರಬಹುದು ಎಂದು ಅಂದಾಜಿಸಬಹುದು. .




ಕಡೆಯಲ್ಲಿ ಎಲ್ಲರ ಪರಿಚಯ ಮಾಡಿಕೊಂಡುತರಬೇತಿ ಬಗ್ಗೆ ಪ್ರತಿಕ್ರಿಯೆ ಕೊಟ್ಟುಒಂದೆರಡು ಗ್ರೂಪ್ ಫೋಟೋ ತೆಗೆದುಕೊಂಡು ಎಲ್ಲರಿಗೂ ಬೈ ಬೈ ಹೇಳಿ ಮನೆಯತ್ತ ಹೊರಟಾಗ ಭಾನುವಾರ ಇದಕ್ಕಿಂತ ಅದ್ಭುತವಾಗಿ ಶುರುವಾಗಲಿಕ್ಕೆ ಸಾಧ್ಯವೇ ಇಲ್ಲವೇನೋ ಎನಿಸಿದ್ದು ಸುಳ್ಳಲ್ಲ. ಒಂದು ಉಲ್ಲಾಸಭರಿತ ಭಾನುವಾರದ ಶುರುವನ್ನ ಸಾಧ್ಯವಾಗಿಸಿದ್ದಕ್ಕೆ ಚನ್ನಬಸಪ್ಪನಿಗೆ ವಿಶೇಷ ಧನ್ಯವಾದ ಹೇಳಲೇಬೇಕು. ಇದನ್ನ ಹೇಳಿದರೆ ನಮ್ಮದೇನು ಇಲ್ಲ ಸರ್ಎಲ್ಲ ನಿಮ್ಮ ಆಸಕ್ತಿ ಅಷ್ಟೇ ಎಂದು ಪ್ರಶಂಸೆಯನ್ನ ನಯವಾಗಿ ಬೇಡ ಎಂದು ಹೇಳುವ ಪರಿ ಮನಸಿನಲ್ಲಿ ಉಳಿಯುತ್ತದೆ. ಪ್ರತ್ಯಕ್ಷಪರೋಕ್ಷ ಕಾರಣರಾದ ಎಲ್ಲರಿಗೂವಿಶೇಷವಾಗಿ BTC ಗೆ ಧನ್ಯವಾದಗಳು



Written By:      Surendra Kumar
Organized By:  Sreemoyee Malakar and Chanabasappa Nad, 
Date of event: 18 November 2018
Place:              Cubbon Park
Pictures:          BTC FB Page


No comments

Bangalore Trekking Club©. Powered by Blogger.